ಖೈಬರ್ ಕಣಿವೆಮಾರ್ಗ-
	ಆಫ್ಫಾನಿಸ್ತಾನಕ್ಕೂ ಪಾಕಿಸ್ತಾನಕ್ಕೂ ನಡುವೆ, ಹಿಮಾಲಯ ಪರ್ವತಶ್ರೇಣಿಯ ಮಧ್ಯ ಇರುವ ಮುಖ್ಯ ಕಣಿವೆ ಮಾರ್ಗ; ಪಷಾವರಿಗೆ ಪಶ್ಚಿಮಕ್ಕೆ 10ಳಿ ಮೈ. ದೂರದಲ್ಲಿದೆ. ಈ ಕಣಿವೆ ಮಾರ್ಗ ಇರುವ ಬೆಟ್ಟಗಳಿಗೂ ಖೈಬರ್ ಎಂದೇ ಹೆಸರು. ಜಗತ್ತಿನ ಬೇರಾವ ಕಣಿವೆಗೂ ಇದಕ್ಕಿರುವ . ರಸ್ತೆ ಮತ್ತು ರೈಲುಮಾರ್ಗಗಳನ್ನು ಕೋದಂತಿರುವ ಈ ಕಣಿವೆ ಮುಂದೆ ಪ್ರಪಾತದಿಂದಲೂ ಹಿಂದೆ 6,000`-10,000` ಎತ್ತರದ ಸುಣ್ಣಗಲ್ಲಿನ ಬಂಡೆಗಳಿಂದಲೂ ಕೂಡಿ ಇಕ್ಕಟ್ಟಾಗಿದೆ.

	ಕಾಬೂಲಿನ ದಾರಿಯಲ್ಲಿರುವ ಈ ಕಣಿವೆಮಾರ್ಗ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದೆ. ಬಹು ಪುರಾತನ ಕಾಲದಿಂದ 18ನೆಯ ಶತಮಾನದ ಮಧ್ಯದ ವರೆಗೆ ತರಂಗತರಂಗವಾಗಿ ಆರ್ಯನ್, ಪರ್ಷಿಯನ್, ಗ್ರೀಕ್, ಸಿಥಿಯನ್, ಹೂಣ ಮತ್ತು ಮುಸ್ಲಿಮ್ ಜನ ಭಾರತಕ್ಕೆ ಬಂದದ್ದು ಈ ಮಾರ್ಗವಾಗಿಯೇ. 	      			(ಕೆ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ